ಬಾಸ್ಕೆಟ್ ಬಾಲ್

ಸಾಧನ ಮತ್ತು ಕೌಶಲ್ಯದ ಅಭಿವೃದ್ಧಿ ಆರಂಭದಲ್ಲಿ ಬ್ಯಾಸ್ಕೆಟ್‌ಬಾಲ್‌ನ್ನು ಕಾಲ್ಚೆಂಡಾಟದ ಚೆಂಡಿನಿಂದ ಆಡಲಾಗುತ್ತಿತ್ತು. ಬ್ಯಾಸ್ಕೆಟ್‌ಬಾಲ್‌ಗೆಂದು ವಿಶೇಷವಾಗಿ ತಯಾರಿಸಿದ ಮೊದಲ ಚೆಂಡುಗಳು ಕಂದುಬಣ್ಣದ್ದಾಗಿದ್ದವು. ೧೯೫೦ರ ಉತ್ತರಾರ್ಧದಲ್ಲಿ (ಇಂತಹ ಪ್ರಯತ್ನ ಹಿಂದೆ ನಡೆದಿರಲಿಲ್ಲ) ಆಟಗಾರರು ಮತ್ತು ಪ್ರೇಕ್ಷಕರಿಗಿಬ್ಬರಿಗೂ ಸರಿಯಾಗಿ ಕಾಣಿಸುವ ಚೆಂಡಿಗಾಗಿ ಹುಡುಕಾಟ ನಡೆಸಿದ ಟೋನಿ ಹಿಂಕಲ್ ಕಿತ್ತಳೆ ಬಣ್ಣದ ಚೆಂಡನ್ನು ಪರಿಚಯಿಸಿದನು. ಈ ಚೆಂಡು ಈಗ ಸಾಮಾನ್ಯ ಬಳಕೆಯಲ್ಲಿದೆ. ತಂಡದ ಸಹ ಆಟಗಾರರಿಗೆ “ಬೌನ್ಸ್ ಪಾಸ್” ಮಾಡುವುದನ್ನು ಹೊರತುಪಡಿಸಿದರೆ, ಚೆಂಡನ್ನು ಪುಟಿಸುತ್ತಾ ಮುಂದುವರಿಯುವುದು ಮೂಲ ಆಟದ ಭಾಗವಲ್ಲ. ಚೆಂಡನ್ನು ಸಾಗಿಸುವುದರಿಂದಲೇ ಚೆಂಡಿನ ಚಲನೆಗೆ ಆರಂಭವಾಗಿತ್ತು. ಚೆಂಡನ್ನು … More ಬಾಸ್ಕೆಟ್ ಬಾಲ್