ಬಾಸ್ಕೆಟ್ ಬಾಲ್

ಸಾಧನ ಮತ್ತು ಕೌಶಲ್ಯದ ಅಭಿವೃದ್ಧಿ

ಆರಂಭದಲ್ಲಿ ಬ್ಯಾಸ್ಕೆಟ್‌ಬಾಲ್‌ನ್ನು ಕಾಲ್ಚೆಂಡಾಟದ ಚೆಂಡಿನಿಂದ ಆಡಲಾಗುತ್ತಿತ್ತು. ಬ್ಯಾಸ್ಕೆಟ್‌ಬಾಲ್‌ಗೆಂದು ವಿಶೇಷವಾಗಿ ತಯಾರಿಸಿದ ಮೊದಲ ಚೆಂಡುಗಳು ಕಂದುಬಣ್ಣದ್ದಾಗಿದ್ದವು. ೧೯೫೦ರ ಉತ್ತರಾರ್ಧದಲ್ಲಿ (ಇಂತಹ ಪ್ರಯತ್ನ ಹಿಂದೆ ನಡೆದಿರಲಿಲ್ಲ) ಆಟಗಾರರು ಮತ್ತು ಪ್ರೇಕ್ಷಕರಿಗಿಬ್ಬರಿಗೂ ಸರಿಯಾಗಿ ಕಾಣಿಸುವ ಚೆಂಡಿಗಾಗಿ ಹುಡುಕಾಟ ನಡೆಸಿದ ಟೋನಿ ಹಿಂಕಲ್ ಕಿತ್ತಳೆ ಬಣ್ಣದ ಚೆಂಡನ್ನು ಪರಿಚಯಿಸಿದನು. ಈ ಚೆಂಡು ಈಗ ಸಾಮಾನ್ಯ ಬಳಕೆಯಲ್ಲಿದೆ. ತಂಡದ ಸಹ ಆಟಗಾರರಿಗೆ “ಬೌನ್ಸ್ ಪಾಸ್” ಮಾಡುವುದನ್ನು ಹೊರತುಪಡಿಸಿದರೆ, ಚೆಂಡನ್ನು ಪುಟಿಸುತ್ತಾ ಮುಂದುವರಿಯುವುದು ಮೂಲ ಆಟದ ಭಾಗವಲ್ಲ. ಚೆಂಡನ್ನು ಸಾಗಿಸುವುದರಿಂದಲೇ ಚೆಂಡಿನ ಚಲನೆಗೆ ಆರಂಭವಾಗಿತ್ತು.

ಚೆಂಡನ್ನು ಪುಟಿಸುತ್ತಾ ಮುಂದುವರಿಯುವುದನ್ನು ಅಂತಿಮವಾಗಿ ಅಳವಡಿಸಿಕೊಳ್ಳಲಾಯಿತು, ಆದರೆ ಆರಂಭದಲ್ಲಿದ್ದ ಚೆಂಡುಗಳ ಅಸಮಪಾರ್ಶ್ವ ರಚನೆಯಿಂದಾಗಿ ಇದು ನಿಯಂತ್ರಿಸಲ್ಪಟ್ಟಿತು. ಚೆಂಡು ತಯಾರಕರು ಚೆಂಡಿಗೆ ಸುಧಾರಿತ ರೂಪು ನೀಡಿದ ನಂತರ, ೧೯೫೦ರ ಸಂದರ್ಭದಲ್ಲಿ ಚೆಂಡನ್ನು ಪುಟಿಸುತ್ತಾ ಮುಂದುವರಿಯುವುದೇ ಆಟದ ಪ್ರಮುಖ ಭಾಗವಾಯಿತು.

ಐತಿಹಾಸಿಕ ಪೂರ್ವಚರಿತ್ರೆ

ಬ್ಯಾಸ್ಕೆಟ್‌ಬಾಲ್‌, ನೆಟ್‌ಬಾಲ್ಡಾಡ್ಜ್‌ಬಾಲ್ವಾಲಿಬಾಲ್, ಮತ್ತು ಲಾಕ್ರೊಸ್ಸೆ ಇವುಗಳನ್ನು ಮಾತ್ರ ಉತ್ತರ ಅಮೇರಿಕನ್ನರು ಕಂಡುಹಿಡಿದ ಚೆಂಡಿನ ಆಟಗಳೆಂದು ಗುರುತಿಸಲಾಗಿದೆ. ಇತರ ಚೆಂಡಿನ ಆಟಗಳಾದ ಬೇಸ್‌ಬಾಲ್ ಮತ್ತು ಕೆನಡಿಯನ್ ಫುಟ್ಬಾಲ್‌ಮೊದಲಾದವು ಕಾಮನ್‌ವೆಲ್ತ್ ಆಫ್ ನೇಷನ್ಸ್ಯುರೋಪ್‌ಏಷ್ಯಾ ಅಥವಾ ಆಫ್ರಿಕಾ ಜೊತೆ ಸಂಪರ್ಕವನ್ನು ಹೊಂದಿವೆ. ಬ್ಯಾಸ್ಕೆಟ್‌ಬಾಲ್‌ ಪ್ರಾಚೀನ ಮೆಸೊ ಅಮೇರಿಕನ್ ಚೆಂಡಿನಾಟದಿಂದ ಹುಟ್ಟಿಕೊಂಡಿದೆ ಎಂಬುದಕ್ಕೆ ಇದುವರೆಗೆ ಯಾವುದೇ ನಿಖರ ಸಾಕ್ಷ್ಯಾಧಾರಗಳು ಸಿಗದಿದ್ದರೂ, ಈ ಆಟದ ಕುರಿತ ಅರಿವು ನೈಸ್ಮಿತ್‌ ಸೃಷ್ಟಿಗಿಂತ ಕನಿಷ್ಠ ೫೦ ವರ್ಷಗಳ ಮುಂಚೆಯೇ ಇತ್ತು ಎಂಬುದು ಜಾನ್ ಲಾಯ್ಡ್ ಸ್ಟೀಫನ್ಸ್‌ ಮತ್ತು ಅಲೆಕ್ಸಾಂಡರ್ ವನ್ ಹಂಬಲ್ಡ್‌ನ ಬರವಣಿಗೆಗಳಿಂದ ವೇದ್ಯವಾಗುತ್ತದೆ. ವಿಶೇಷವಾಗಿ ಫ್ರೆಡರಿಕ್ ಕ್ಯಾಥರ್‌ವುಡ್‌ರರೇಖಾಚಿತ್ರಗಳನ್ನು ಹೊಂದಿರುವ ಸ್ಟೀಫನ್‌ನ ಕೃತಿಗಳು ೧೯ನೇ ಶತಮಾನದ ಬಹುತೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಲಭ್ಯವಾಗಿದೆ, ಹಾಗೂ ಅವು ವ್ಯಾಪಕವಾಗಿ ಪ್ರಚಾರ ಕಂಡು ಜನಪ್ರಿಯವಾಗಿದ್ದವು.

USAಯ ಮೆಸ್ಸಾಚುಸೆಟ್ಸ್‌ನ ಸ್ಪ್ರಿಂಗ್‌ಫೀಲ್ಡ್‌ನಲ್ಲಿರುವಇಂಟರ್‌ನ್ಯಾಷನಲ್ ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್ ಟ್ರೈನಿಂಗ್ ಸ್ಕೂಲ್‌ನಲ್ಲಿ [೨](YMCA) (ಇಂದು, ಸ್ಪ್ರಿಂಗ್‌ಫೀಲ್ಡ್ ಕಾಲೇಜು) ದೈಹಿಕ ಶಿಕ್ಷಣ ಪ್ರಾಧ್ಯಾಪಕ ಮತ್ತು ಬೋಧಕರಾಗಿದ್ದ ಕೆನಡಾ ಸಂಜಾತ ಡಾ. ಜೇಮ್ಸ್ ನೈಸ್ಮಿತ್[೩] ಅವರು ನ್ಯೂ ಇಂಗ್ಲೆಂಡ್‌ನ ದೀರ್ಘಾವಧಿಯ ಚಳಿಗಾಲದ ವೇಳೆ ತಮ್ಮ ವಿದ್ಯಾರ್ಥಿಗಳ ದೈಹಿಕ ಕ್ಷಮತೆ ಕಾಪಾಡುವುದು ಮತ್ತು ವಿದ್ಯಾರ್ಥಿಗಳನ್ನು ಸದಾ ಚಟುವಟಿಕೆಗಳಲ್ಲಿ ನಿರತರಾಗಿಸುವ ನಿಟ್ಟಿನಲ್ಲಿ ೧೮೯೧ರ ಡಿಸೆಂಬರ್‌ನ ಆರಂಭದಲ್ಲಿ ಈ ಒಳಾಂಗಣ ಆಟವನ್ನು ಕಂಡುಹಿಡಿದರು.ವ್ಯಾಯಾಮ ಶಾಲೆಗಳಿಗೆ ಸೂಕ್ತವಾಗದ ಅಥವಾ ಸ್ವಲ್ಪ ಮಟ್ಟಿಗೆ ಮಾತ್ರ ಸರಿಹೊಂದುವ ಇತರ ಚಿಂತನೆಗಳನ್ನು ಕೈಬಿಟ್ಟ ಅವರು ಆಟ ಕುರಿತು ಮೂಲ ನಿಯಮಗಳನ್ನುಬರೆದರು, ಮಾತ್ರವಲ್ಲದೆ ನೆಲದಿಂದ ೧೦ ಅಡಿ (೩.೦೫ ಮೀ) ಎತ್ತರಕ್ಕೆ ಪೀಚ್ ಬ್ಯಾಸ್ಕೆಟ್‌ನ್ನು ಮೊಳೆ ಹೊಡೆದು ಭದ್ರಪಡಿಸಿದರು. ಈ ಪೀಚ್ ಬ್ಯಾಸ್ಕೆಟ್ ಆಧುನಿಕ ಬ್ಯಾಸ್ಕೆಟ್‌ಬಾಲ್‌ ಬಲೆಯ ರೀತಿ ಇರದೆ ತಳಭಾಗವನ್ನು ಮಾತ್ರ ಹೊಂದಿತ್ತು. ಆದ್ದರಿಂದ ಪ್ರತೀ “ಬ್ಯಾಸ್ಕೆಟ್‌” ಅಥವಾ ಅಂಕ ಗಳಿಸಿದಾಗ ಚೆಂಡುಗಳನ್ನು ಕೈಯಾರೆ ಬ್ಯಾಸ್ಕೆಟ್‌ನಿಂದ ತೆಗೆಯಬೇಕಾಗಿತ್ತು; ಇದು ಸಮರ್ಪಕವಾಗಿರದ ಕಾರಣ ಬ್ಯಾಸ್ಕೆಟ್‌ನ ತಳಭಾಗದಲ್ಲಿ ತೂತುಮಾಡಲಾಯಿತು, ಇದರಿಂದಾಗಿ ಚೆಂಡುಗಳು ಒಳಬೆಣೆಯೊಂದಿಗೆ ಸರಾಗವಾಗಿ ಒಳತೂರಿ ಹೊರಬರುತ್ತಿದ್ದವು. ಅಂತಿಮವಾಗಿ ಬ್ಯಾಸ್ಕೆಟ್‌‍ನ ಹಿಂಬದಿಯಲ್ಲಿ ಲೋಹದ ಹೂಪ್ ಬರುವವರೆಗೆ ಅಂದರೆ ೧೯೦೬ರವರೆಗೆ ಈ ಪೀಚ್ ಬ್ಯಾಸ್ಕೆಟ್‌ಗಳನ್ನೇ ಬಳಸಲಾಗುತ್ತಿತ್ತು. ಚೆಂಡು ಸರಾಗವಾಗಿ ಹಾದುಹೋಗುವ ನಿಟ್ಟಿನಲ್ಲಿ ಇನ್ನೂ ಅನೇಕ ಬದಲಾವಣೆಗಳನ್ನು ಮಾಡಲಾಯಿತು, ಇವು ಇಂದಿನ ನಾವು ತಿಳಿದಿರುವ ಆಟಕ್ಕೆ ಸುಗಮ ನೆಲಗಟ್ಟು ಹಾಕಿಕೊಟ್ಟಿತು. ಬ್ಯಾಸ್ಕೆಟ್‌ಗಳಿಗೆ ಷೂಟ್ ಮಾಡಲು ಕಾಲ್ಚೆಂಡಾಟದ ಚೆಂಡುಗಳನ್ನು ಬಳಸಲಾಗುತ್ತಿತ್ತು. ಒಬ್ಬ ಆಟಗಾರನು ಒಮ್ಮೆ ಬ್ಯಾಸ್ಕೆಟ್‌ನಲ್ಲಿ ಚೆಂಡನ್ನು ಹಾಕಿದಾಗ ಅವನ ತಂಡ ಒಂದು ಅಂಕಗಳಿಸುತ್ತದೆ. ಹೆಚ್ಚು ಅಂಕಗಳಿಸುವ ತಂಡವು ಆಟವನ್ನು ಗೆಲ್ಲುತ್ತದೆ.[೪] ಸಾಮಾನ್ಯವಾಗಿ ಬ್ಯಾಸ್ಕೆಟ್‌ಗಳನ್ನು ಆಟದ ಅಂಕಣದ ಮಧ್ಯದ ಅಂತಸ್ತಿನ ಬಾಲ್ಕನಿಯಲ್ಲಿ ಹೊಡೆಯಲಾಗುತ್ತಿತ್ತು. ಆದರೆ ಬಾಲ್ಕನಿಯಲ್ಲಿರುವ ವೀಕ್ಷಕರು ಚೆಂಡು ಹೊಡೆಯುವುದಕ್ಕಾಗಿ ಮಧ್ಯಪ್ರವೇಶಿಸಲು ಆರಂಭಿಸಿದ್ದರಿಂದ ಇದು ಕಾರ್ಯಸಾಧ್ಯವಾಗಲಿಲ್ಲ. ಈ ಹಸ್ತಕ್ಷೇಪವನ್ನು ತಡೆಯುವುದಕ್ಕಾಗಿ ಹಲಗೆಯನ್ನು ಬಳಸಲಾಯಿತು; ಇದರಿಂದಾಗಿ ಹಿನ್ನೆಗೆತದ ಹೊಡೆತಗಳೂ ಸಾಧ್ಯವಾಯಿತು.[೫]

೧೯೪೬ರಲ್ಲಿ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್ ಆಫ್ ಅಮೇರಿಕಾ (BAA) ಸ್ಥಾಪನೆಯಾಯಿತು. ೧೯೪೬ರ ನವೆಂಬರ್ ೧ರಲ್ಲಿ ಕೆನಡಾದ ಒಂಟೊರಿಯೊದ ಟೊರೊಂಟೊದಲ್ಲಿ ಟೊರೊಂಟೊ ಹಸ್ಕೀಸ್ ಮತ್ತು ನ್ಯೂಯಾರ್ಕ್ ಕ್ನಿಕರ್‌ಬೊಕರ್ಸ್ ಮಧ್ಯೆ ಮೊದಲ ಪಂದ್ಯ ನಡೆಯಿತು. ಮೂರು ವರ್ಷಗಳ ನಂತರ ೧೯೪೯ರಲ್ಲಿ ನ್ಯಾಷನಲ್ ಬ್ಯಾಸ್ಕೆಟ್‌ಬಾಲ್‌ ಲೀಗ್‌ನೊಂದಿಗೆ BAA ಸೇರಿಕೊಂಡು ನ್ಯಾಷನಲ್ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ (NBA) ರಚನೆಯಾಯಿತು. ಅಮೇರಿಕನ್ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್೧೯೬೭ರಲ್ಲಿ ದಿಢೀರನೆ ಹುಟ್ಟಿಕೊಂಡಿತು, ಮತ್ತು ೧೯೭೬ರಲ್ಲಿ ABA-NBA ಒಕ್ಕೂಟ ಅಸ್ತಿತ್ವಕ್ಕೆ ಬರುವವರೆಗೆ NBAಯ ಪ್ರಾಬಲ್ಯಕ್ಕೆ ಬೆದರಿಕೆಯಾಗಿತ್ತು. ಜನಪ್ರಿಯತೆ, ಸಂಭಾವನೆ, ಕೌಶಲ್ಯ ಮತ್ತು ಸ್ಪರ್ಧೆಯ ಪ್ರತಿಷ್ಠೆಯ ತ್ತಿಪರ ಬ್ಯಾಸ್ಕೆಟ್‌ಬಾಲ್‌ ಒಕ್ಕೂಟವಾಗಿದೆ.

ಬ್ಯಾಸ್ಕೆಟ್‌ಬಾಲ್ ಒಂದು ಸಾಂಘಿಕ ಆಟವಾಗಿದ್ದು, ೫ ಆಟಗಾರರ ಎರಡು ತಂಡಗಳು ಸಂಘಟಿತ ನಿಯಮದಡಿ ೧೦ ಅಡಿ (೩.೦೪೮ ಮೀ) ಎತ್ತರದ ಹೂಪ್‍ನಲ್ಲಿ (ಗೋಲ್ಚೆಂಡನ್ನು ಹಾಕುವ ಮೂಲಕ ಹೆಚ್ಚು ಅಂಕಗಳಿಸಲು ಪರಸ್ಪರ ಸೆಣಸಾಡುತ್ತವೆ. ಬ್ಯಾಸ್ಕೆಟ್‌ಬಾಲ್‌ ಒಂದು ಸುಪ್ರಸಿದ್ಧ ಹಾಗೂ ಪ್ರಪಂಚದಾದ್ಯಂತ ವ್ಯಾಪಕವಾಗಿ ವೀಕ್ಷಿಸುವ ಆಟ.[೧]ಬ್ಯಾಸ್ಕೆಟ್‌ಬಾಲ್‌

ಸ್ಪರ್ಧಾತ್ಮಕ ಬ್ಯಾಸ್ಕೆಟ್‌ಬಾಲ್‌ ಪ್ರಧಾನವಾಗಿ ಬ್ಯಾಸ್ಕೆಟ್‌ಬಾಲ್‌ ಅಂಕಣದಲ್ಲಿ ಆಡುವ ಒಂದು ಒಳಾಂಗಣ ಆಟ. ವಿಶೇಷ ನಿಯಮಗಳೇನೂ ಇಲ್ಲದ ಹೊರಾಂಗಣದ ಬ್ಯಾಸ್ಕೆಟ್‌ಬಾಲ್‌ ನಗರದ ಒಳಭಾಗಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ.

೧೯೪೬ರಲ್ಲಿ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್ ಆಫ್ ಅಮೇರಿಕಾ (BAA) ಸ್ಥಾಪನೆಯಾಯಿತು. ೧೯೪೬ರ ನವೆಂಬರ್ ೧ರಲ್ಲಿ ಕೆನಡಾದ ಒಂಟೊರಿಯೊದ ಟೊರೊಂಟೊದಲ್ಲಿ ಟೊರೊಂಟೊ ಹಸ್ಕೀಸ್ ಮತ್ತು ನ್ಯೂಯಾರ್ಕ್ ಕ್ನಿಕರ್‌ಬೊಕರ್ಸ್ ಮಧ್ಯೆ ಮೊದಲ ಪಂದ್ಯ ನಡೆಯಿತು. ಮೂರು ವರ್ಷಗಳ ನಂತರ ೧೯೪೯ರಲ್ಲಿ ನ್ಯಾಷನಲ್ ಬ್ಯಾಸ್ಕೆಟ್‌ಬಾಲ್‌ ಲೀಗ್‌ನೊಂದಿಗೆ BAA ಸೇರಿಕೊಂಡು ನ್ಯಾಷನಲ್ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ (NBA) ರಚನೆಯಾಯಿತು. ಅಮೇರಿಕನ್ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್೧೯೬೭ರಲ್ಲಿ ದಿಢೀರನೆ ಹುಟ್ಟಿಕೊಂಡಿತು, ಮತ್ತು ೧೯೭೬ರಲ್ಲಿ ABA-NBA ಒಕ್ಕೂಟ ಅಸ್ತಿತ್ವಕ್ಕೆ ಬರುವವರೆಗೆ NBAಯ ಪ್ರಾಬಲ್ಯಕ್ಕೆ ಬೆದರಿಕೆಯಾಗಿತ್ತು. ಜನಪ್ರಿಯತೆ, ಸಂಭಾವನೆ, ಕೌಶಲ್ಯ ಮತ್ತು ಸ್ಪರ್ಧೆಯ ಪ್ರತಿಷ್ಠೆಯ ವಿಷಯದಲ್ಲಿ NBA ಇಂದು ಪ್ರಪಂಚದಲ್ಲೇ ಅಗ್ರಸ್ಥಾನದಲ್ಲಿರುವ ವೃತ್ತಿಪರ ಬ್ಯಾಸ್ಕೆಟ್‌ಬಾಲ್‌ ಒಕ್ಕೂಟವಾಗಿದೆ.


Leave a comment